ಜೂನ್ ೧೪ - ಜೂನ್ ತಿಂಗಳ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೬೫ ನೇ ದಿನ (ಅಧಿಕ ವರ್ಷದಲ್ಲಿ ೧೬೬ ನೇ ದಿನ). ಜೂನ್ ೨೦೨೪ == ಪ್ರಮುಖ ಘಟನೆಗಳು == ೧೭೭೭ - ಅಮೇರಿಕ್ ಸಂಯುಕ್ತ ಸಂಸ್ಥಾನದ ಧ್ವಜವನ್ನು ಆಯ್ಕೆ ಮಾಡಲಾಯಿತು. ೧೮೨೨ - ಚಾರ್ಲ್ಸ್ ಬಾಬೇಜ್, ತನ್ನ ಗಣಕಯಂತ್ರದ ಉಪಾಯವನ್ನು ಪ್ರಸ್ತಾಪ ಮಾಡಿದ. ೧೯೬೨ - ಯೂರೋಪ್‍ನ ಬಾಹ್ಯಾಕಾಶ ಸಂಸ್ಥೆಯ ಸ್ಥಾಪನೆ. ೧೯೮೨ - ಅರ್ಜೇಂಟಿನದ ಪಡೆಗಳ ಶರಣಾಗತಿಯಿಂದ ಫಾಕ್‍ಲ್ಯಾಂಡ್ಸ್ ಯುದ್ಧ ಸಮಾಪ್ತಿ. == ಜನನ == ೧೭೩೬ - ಚಾರ್ಲ್ಸ್ ಅಗಸ್ಟಿನ್ ದ ಕೂಲಂಬ್, ಫ್ರಾನ್ಸ್ನ ಭೌತವಿಜ್ಞಾನಿ. ೧೮೫೬ - ಆಂಡ್ರೆ ಮಾರ್ಕೊವ್, ರಷ್ಯಾದ ಗಣಿತಜ್ಞ. ೧೮೬೮ - ಕಾರ್ಲ್ ಲ್ಯಾಂಡ್‍ಸ್ಟೈನರ್, ಆಸ್ಟ್ರಿಯದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ. ೧೯೬೯ - ಸ್ಟೆಫಿ ಗ್ರಾಫ್, ಜರ್ಮನಿಯ ಟೆನ್ನಿಸ್ ಕ್ರೀಡಾಪಟು. == ನಿಧನ == ೧೯೪೬ - ಜಾನ್ ಲೊಗಿ ಬೈರ್ಡ್, ಸ್ಕಾಟ್‍ಲ್ಯಾಂಡ್ನ ದೂರದರ್ಶನದ ಮೊದಲಿಗ. == ರಜೆಗಳು/ಆಚರಣೆಗಳು == ಫಾಕ್‍ಲ್ಯಾಂಡ್ ದ್ವೀಪಗಳು - ಬಿಡುಗಡೆ ದಿನಾಚರಣೆ. ಅಮೇರಿಕ ಸಂಯುಕ್ತ ಸಂಸ್ಥಾನ - ಧ್ವಜ ದಿನ. ವಿಶ್ವ ರಕ್ತದಾನಿಗಳ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ